Rajyotsava ಪ್ರಶಸ್ತಿ ಪಡೆದ ಮರುದಿನವೇ ಹಿರಿಯ ರಂಗಭೂಮಿ ಕಲಾವಿದ L.P. Rajanna ನಿಧನ..!

Rajyotsava ಪ್ರಶಸ್ತಿ ಪಡೆದ ಮರುದಿನವೇ ಹಿರಿಯ ರಂಗಭೂಮಿ ಕಲಾವಿದ L.P. Rajanna ನಿಧನ..!

ಗುಬ್ಬಿ: ತುಮಕೂರು(Tumakuru) ಜಿಲ್ಲೆಯ ಗುಬ್ಬಿ(gubbi)  ತಾಲೂಕಿನ ಹಿರಿಯ ರಂಗಭೂಮಿ ಕಲಾವಿದ (Veteran theatre artist) ಹಾಗೂ ಹಾರ್ಮೋನಿಯಂ ಮಾಸ್ಟರ್ (Harmonium Master ) ಎಲ್.ಪಿ. ರಾಜಣ್ಣ (L.P. Rajanna ) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.( Demise)  ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ವಿಶೇಷವೆಂದರೆ, ನವೆಂಬರ್ 1ರಂದು ಗುಬ್ಬಿ (gubbi)  ತಾಲೂಕು ಆಡಳಿತದ ವತಿಯಿಂದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ (Kannada Rajyotsava ) ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಪಡೆದ ಮರುದಿನವೇ ಅವರು ನಿಧನರಾಗಿರುವುದು ಕುಟುಂಬಸ್ಥರು, ಕಲಾಭಿಮಾನಿಗಳು ಹಾಗೂ ಸ್ಥಳೀಯರಲ್ಲಿ ದುಃಖ ಮೂಡಿಸಿದೆ.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಮರುದಿನ ಎಲ್.ಪಿ. ರಾಜಣ್ಣ ನಿಧನ

ಗುಬ್ಬಿ ತಾಲೂಕಿನ ಲಿಂಗಮ್ಮನಹಳ್ಳಿ ನಿವಾಸಿಯಾಗಿದ್ದ ಎಲ್.ಪಿ. ರಾಜಣ್ಣ ಅವರು ರಂಗಭೂಮಿ ಹಾಗೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.ಹಿರಿಯ ಹಾರ್ಮೋನಿಯಂ ಕಲಾವಿದರಾಗಿದ್ದ ಅವರಿಗೆ ಈ ಬಾರಿಯ ತಾಲೂಕು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ನೀಡಲಾಗಿತ್ತು.ಬಹುಕಾಲದ ರಾಜ್ಯೋತ್ಸವ ಪ್ರಶಸ್ತಿ ಪಡೆಯುವ ಆಸೆ ಈಡೇರಿದ ಬೆನ್ನಲ್ಲೇ ಅವರು ನಿಧನರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಾಸಕ ಎಸ್.ಆರ್. ಶ್ರೀನಿವಾಸ್ ಸಂತಾಪ

ಹಿರಿಯ ರಂಗಭೂಮಿ ಕಲಾವಿದ ಎಲ್.ಪಿ. ರಾಜಣ್ಣ ಅವರ ನಿಧನಕ್ಕೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಸಂತಾಪ ಸೂಚಿಸಿದ್ದಾರೆ.ರಂಗಭೂಮಿ ಕ್ಷೇತ್ರದಲ್ಲಿ ರಾಜಣ್ಣ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿರುವ ಶಾಸಕರು, ಅವರ ಅಗಲಿಕೆಯಿಂದ ಕುಟುಂಬಕ್ಕೆ ಉಂಟಾದ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.ಇದೇ ವೇಳೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಆರ್. ವೆಂಕಟೇಶ್ ಅವರೂ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ ರಾಜಣ್ಣ

ದಿವಂಗತ ಎಲ್.ಪಿ. ರಾಜಣ್ಣ ಅವರು ಇಬ್ಬರು ಪುತ್ರರು, ಒಬ್ಬ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ರಂಗಭೂಮಿಯಲ್ಲಿ ಮೂರು ದಶಕಗಳ ಸೇವೆ ಸಲ್ಲಿಸಿದ ಅವರು, ಹಲವು ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದರು.

ಒಟ್ಟಿನಲ್ಲಿ, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮರುದಿನವೇ ಎಲ್.ಪಿ. ರಾಜಣ್ಣ ಅವರು ನಿಧನರಾಗಿರುವುದು ಗುಬ್ಬಿ ತಾಲೂಕಿನ ಕಲಾ ವಲಯದಲ್ಲಿ ದುಃಖ ಮೂಡಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ