CM,DCM ಮನೆಗೇ ಹುಸಿ ಬಾಂಬ್ ಬೆದರಿಕೆ! ತಮಿಳುನಾಡು ಮೂಲದ ಶಂಕಿತನಿಗಾಗಿ ಬಲೆ ಬೀಸಿದ ಪೊಲೀಸರು.

CM,DCM ಮನೆಗೇ ಹುಸಿ ಬಾಂಬ್ ಬೆದರಿಕೆ! ತಮಿಳುನಾಡು ಮೂಲದ ಶಂಕಿತನಿಗಾಗಿ ಬಲೆ ಬೀಸಿದ ಪೊಲೀಸರು.

ಬೆಂಗಳೂರು:  ರಾಜ್ಯದಲ್ಲಿ ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಳ‌ವಾಗಿವೆ. ಹೀಗಾಗಿ ಸರ್ಕಾರ ಎಸ್​​ಐಟಿ ರಚನೆ ಮಾಡಿದೆ. ಈ ಮಧ್ಯೆ ಬಾಂಬ್ ಬೆದರಿಕೆ ಕರೆಗಳ ಕಾಟ ಇದೀಗ ಮತ್ತೊಂದು ಹಂತಕ್ಕೆ ತಲುಪಿದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮನೆಗೇ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ​

ಹುಸಿ ಬಾಂಬ್ ಬೆದರಿಕೆ ಪ್ರಕರಣ ಹೆಚ್ಚಳ‌ ಹಿನ್ನೆಲೆ ಬುಧವಾರವಷ್ಟೇ ರಾಜ್ಯ ಸರ್ಕಾರ ಎಸ್​​ಐಟಿ ರಚನೆ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ಮನೆಗೇ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಆ ಮೂಲಕ ಬಾಂಬ್ ಬೆದರಿಕೆ ಕಾಟ ಇದೀಗ ಮತ್ತೊಂದು ಮಜಲಿಗೆ ತಲುಪಿದೆ. ತಮಿಳುನಾಡಿನ ವ್ಯಕ್ತಿಯೋರ್ವನಿಂದ ಬೆದರಿಕೆ ಸಂದೇಶ ಕಳುಹಿಸಿರುವ ಅನುಮಾನಗಳು ವ್ಯಕ್ತವಾಗಿದ್ದು, ಆತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *