ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ (Power Star) , ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ (Puneeth Rajkumar ) ಅವರ 5ನೇ ಪುಣ್ಯಸ್ಮರಣೆ ಅಂಗವಾಗಿ ದೊಡ್ಮನೆ ಕುಟುಂಬದ ಸದಸ್ಯರು ಅಪ್ಪು ಸಮಾಧಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ಕುಮಾರ್ (Puneeth Rajkumar ) ಅವರ ಸಮಾಧಿ ಬಳಿ ಕುಟುಂಬಸ್ಥರು ಒಟ್ಟುಗೂಡಿ ಅಗಲಿದ ನಟನನ್ನು ಸ್ಮರಿಸಿದ್ದಾರೆ.
ಇದೇ ವೇಳೆ, ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಪುತ್ರಿ ಧೃತಿ, ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್ (Puneeth Rajkumar ) ಹಾಗೂ ನಟ ಯುವ ರಾಜ್ಕುಮಾರ್ (Yuva Rajkumar) ಸೇರಿದಂತೆ ಕುಟುಂಬದ ಸದಸ್ಯರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
Puneeth Rajkumar 5ನೇ ಪುಣ್ಯಸ್ಮರಣೆ: ಸಮಾಧಿಗೆ ಕುಟುಂಬಸ್ಥರ ಭೇಟಿ
ಪುನೀತ್ ರಾಜ್ಕುಮಾರ್ ಅವರು 2021ರ ಅಕ್ಟೋಬರ್ 29ರಂದು ನಿಧನರಾಗಿದ್ದರು. ಹೀಗಾಗಿ, 2026ರ ಅಕ್ಟೋಬರ್ 29ರಂದು ಅವರ ಅಗಲಿಕೆಗೆ ಐದು ವರ್ಷಗಳು ಪೂರ್ಣಗೊಂಡಿವೆ.ಈ ಹಿನ್ನೆಲೆಯಲ್ಲಿ ದೊಡ್ಮನೆ ಕುಟುಂಬದ ಸದಸ್ಯರು ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದಾರೆ. ಅಲ್ಲದೆ, ಅಪ್ಪು ಸಮಾಧಿ ಬಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.ನಟ ರಾಘವೇಂದ್ರ ರಾಜ್ಕುಮಾರ್ ಹಾಗೂ ಯುವ ರಾಜ್ಕುಮಾರ್ ಕೂಡ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಪುನೀತ್ ಅವರನ್ನು ಸ್ಮರಿಸಿದ್ದಾರೆ.
ಅಪ್ಪು ಸಮಾಧಿಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಧೃತಿ ಆಗಮನ
ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಪುತ್ರಿ ಧೃತಿ ಕೂಡ ಸಮಾಧಿ ಬಳಿ ಆಗಮಿಸಿದ್ದಾರೆ.ಈ ಸಂದರ್ಭದಲ್ಲಿ ಕುಟುಂಬದ ಇತರ ಸದಸ್ಯರೊಂದಿಗೆ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ, ಪುನೀತ್ ರಾಜ್ಕುಮಾರ್ ಅವರ ನೆನಪಿನಲ್ಲಿ ಕುಟುಂಬಸ್ಥರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ.
ಅಪ್ಪುಗೆ ಇಷ್ಟವಾದ ಖಾದ್ಯಗಳನ್ನಿಟ್ಟು ವಿಶೇಷ ಪೂಜೆ
ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ಕುಟುಂಬಸ್ಥರು ಅಪ್ಪುಗೆ ಇಷ್ಟವಾಗುತ್ತಿದ್ದ ಆಹಾರ ಪದಾರ್ಥಗಳನ್ನು ಸಮಾಧಿ ಬಳಿ ಇರಿಸಿ ಪೂಜೆ ಸಲ್ಲಿಸಿದ್ದಾರೆ.ವಿಶೇಷವಾಗಿ, ಪುನೀತ್ ಅವರ ನೆಚ್ಚಿನ ಖಾದ್ಯಗಳನ್ನು ಅರ್ಪಿಸುವ ಮೂಲಕ ಕುಟುಂಬದವರು ಅವರನ್ನು ಸ್ಮರಿಸಿದ್ದಾರೆ. ಈ ವೇಳೆ ರಾಘವೇಂದ್ರ ರಾಜ್ಕುಮಾರ್, ಯುವ ರಾಜ್ಕುಮಾರ್ ಹಾಗೂ ದೊಡ್ಮನೆ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು.
ಪುನೀತ್ ರಾಜ್ಕುಮಾರ್ ಅಗಲಿಕೆಗೆ ಐದು ವರ್ಷ
ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಗುರುತಿಸಿಕೊಂಡಿದ್ದ ಪುನೀತ್ ರಾಜ್ಕುಮಾರ್, ನಂತರ ನಾಯಕನಟನಾಗಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅಭಿನಯದ ಜೊತೆಗೆ ಅವರ ಸರಳ ವ್ಯಕ್ತಿತ್ವ ಹಾಗೂ ಸಮಾಜಮುಖಿ ಕಾರ್ಯಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದವು.ಆದರೆ, 2021ರ ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ಆಘಾತ ತಂದಿತ್ತು. ಇದೀಗ ಅವರ ಅಗಲಿಕೆಗೆ ಐದು ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಅಪ್ಪು ಅವರನ್ನು ಸ್ಮರಿಸುತ್ತಿದ್ದಾರೆ.




